ಗುರುವಾರ, ಜೂನ್ 20

ನಿರ್ಮಿತಿ ಕೇಂದ್ರದ ಕಾರ್ಯವ್ಯಾಪ್ತಿಯು ಚಿತ್ರದುರ್ಗ ಜಿಲ್ಲೆಯಾದ್ಯಾಂತ ಹೊಂದಿದ್ದು ಆರು ತಾಲ್ಲೂಕುಗಳು ಒಳಗೊಂಡಿರುತ್ತದೆ. ಹಿರಿಯೂರು ತಾಲ್ಲೂಕು ಮೇಟಿಕುರ್ಕೆ ಗ್ರಾಮದಲ್ಲಿ ಶಾಖೆ ಹೊಂದಿರುತ್ತದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ 1999 ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರವು ಸದರಿ ನಿಯಮದ ಕಲಂ ೪(ಜಿ) ಅಡಿಯಲ್ಲಿ ಪ್ರತಿ ವರ್ಷ ನಿರ್ಮಿತಿ ಕೇಂದ್ರಗಳಿಗೆ ವಿನಾಯ್ತಿ ನೀಡುತ್ತಿದೆ. ಈ ಆಧಾರದ ಮೇಲೆ ಸರ್ಕಾರದ ವಿವಿಧ ಇಲಾಖೆಗಳು ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಕಾಮಗಾರಿಗಳನ್ನು ನೇರವಾಗಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗುತ್ತಿವೆ.

2022-23ರಲ್ಲಿ ನಿರ್ಮಿತಿ ಕೇಂದ್ರಕ್ಕೆ ಒಟ್ಟು 750 ಕಾಮಗಾರಿಗಳನ್ನು ವಹಿಸಲಾಗಿತ್ತು. ಸದರಿ ಕಾಮಗಾರಿಗಳಿಗಾಗಿ ಮತ್ತು ಹಿಂದಿನ ಸಾಲುಗಳ ಮುಂದುವರೆದ ಕಾಮಗಾರಿಗಳಿಗಾಗಿ ಒಟ್ಟು ರೂ. 8002.72 ಲಕ್ಷಗಳು ಬಿಡುಗಡೆಯಾಗಿರುತ್ತದೆ. 2022-23ರ ಆರಂಭ ಶಿಲ್ಕು ರೂ 2865.50 ಲಕ್ಷಗಳು ಇದ್ದು ಒಟ್ಟು ರೂ. 8559.10 ಲಕ್ಷಗಳ ವೆಚ್ಚ ಭರಿಸಲಾಗಿರುತ್ತದೆ. ಅಂತಿಮ ಶಿಲ್ಕು ರೂ. 2309.00 ಲಕ್ಷಗಳಿರುತ್ತದೆ. ಮುಂದುವರೆದ ಕಾಮಗಾರಿಗಳು ಸೇರಿಕೊಂಡು ಒಟ್ಟು 276 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಉಳಿದ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ. ಮಾಡಲಾಗಿರುವ 8559.10 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿಗಳಿಗಾಗಿ 7397.38 ಲಕ್ಷ ಹಾಗೂ ನಿರ್ವಹಣೆಗಾಗಿ ಆಡಳಿತ ವೆಚ್ಚ 311.36 ಲಕ್ಷಗಳು, ಜಿ.ಎಸ್.ಟಿ 589.84 ಲಕ್ಷಗಳು, ಕಾರ್ಮಿಕ ಸೆಸ್ 102.42 ಲಕ್ಷಗಳು, ರಾಜಧನ 114.72 ಲಕ್ಷಗಳು, ಆದಾಯ ತೆರಿಗೆ 43.38 ಲಕ್ಷಗಳು ಸೇರಿರುತ್ತದೆ.

ಉತ್ಪಾದನಾ ಘಟಕದಲ್ಲಿ 47142 ಸಿ.ಸಿ. ಬ್ಲಾಕ್ಸ್ ಹಾಗೂ 50 ಸಿ.ಸಿ.ಬೆಂಚ್‌ಗಳನ್ನು ಉತ್ಪಾದಿಸಲಾಗಿರುತ್ತದೆ. ವರ್ಕ್ಶಾಪ್‌ನಲ್ಲಿ 36 ವಿವಿಧ ಅಳತೆಯ ಬಾಗಿಲುಗಳು, 71 ಕಿಟಕಿಗಳು, 14 ವೆಂಟಿಲೇಟರ್‌ಗಳನ್ನು ತಯಾರಿಸಲಾಗಿರುತ್ತದೆ. ಉತ್ಪಾದಿಸಲಾದ ಸಾಮಗ್ರಿಗಳನ್ನು ನಿರ್ಮಿತಿ ಕೇಂದ್ರದ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

ಮಾಹಿತಿ ಹಕ್ಕು ಅಧಿನಿಯಮ 2005ರ ವ್ಯಾಪ್ತಿಗೆ ನಿರ್ಮಿತಿ ಕೇಂದ್ರವು ಒಳಪಡುವುದರ ಬಗ್ಗೆ ಕರ್ನಾಟಕ ಮಾಹಿತಿ ಆಯೋಗವು ನೀಡಿದ ಆದೇಶಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ತಡೆಯಾಜ್ಞೆಯು ಇನ್ನೂ ಜಾರಿಯಲ್ಲಿರುತ್ತದೆ.

ನಿರ್ಮಿತಿ ಕೇಂದ್ರದ ಕಾರ್ಯಾಚರಣೆಯು ವಿವಿಧ ಕಾಯ್ದೆಗಳಲ್ಲಿ ನೀಡಿರುವ ಸೂಚನೆಗಳಂತೆ ಕಾಲಕಾಲಕ್ಕೆ ಸರ್ಕಾರದಿಂದ ಜಾರಿಗೊಳಿಸಲಾದ ಆದೇಶಗಳು, ಸುತ್ತೋಲೆಗಳು ಮತ್ತು ಸಂಸ್ಥೆಯ ಆಡಳಿತ ಮಂಡಳಿ/ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಪಾಲಿಸುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತಿದೆ.

2022-23ರ ಸಾಲಿನಲ್ಲಿ ಆಡಳಿತ ಮಂಡಳಿಯ ಒಂದು ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು ಸಭೆಗಳಲ್ಲಿ ಕೈಗೊಂಡ ತೀರ್ಮಾನಗಳನ್ನು ನಿಯಮಾನುಸಾರ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

2022-23ರ ಸಾಲಿನ ಕಾರ್ಯಚಟುವಟಿಕೆಗಳು

ಕ್ರ.ಸ ಇಲಾಖೆಯ  ಹೆಸರು ಕಾಮಗಾರಿಗಳ ಸಂಖ್ಯೆ
1 ಜಿಲ್ಲಾಧಿಕಾರಿಗಳ ಕಛೇರಿ (ಸಂಸದರ, ಶಾಸಕರ & ವಿಧಾನಪರಿಷತ್ ಸದಸ್ಯರ ಕಾಮಗಾರಿಗಳು ಸೇರಿ) 198
2 ಜಿಲ್ಲಾ ಪಂಚಾಯತ್ 191
3 ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ 136
4 ಜಿಲ್ಲಾ ಆರೋಗ್ಯ ಇಲಾಖೆ 47
5 ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ 31
6 ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ 30
7 ಮುಜರಾಯಿ ಇಲಾಖೆ 19
8 ಪರಿಶಿಷ್ಟ ಪಂಗಡ ಇಲಾಖೆ 15
9 ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ 14
10 ನಿರಾಶ್ರಿತರ ಪರಿಹಾರ ಕೇಂದ್ರ 12
11 ಕೃಷಿ ಇಲಾಖೆ 11
12 ತಾಲ್ಲೂಕು ಪಂಚಾಯತ್ 9
13 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 7
14 ಆಯುಷ್ ಇಲಾಖೆ 7
15 ಪೊಲೀಸ್ ಇಲಾಖೆ 5
16 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4
17 ಹಾಪ್‌ಕಾಮ್ಸ್ 3
18 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2
19 ಸಾರ್ವಜನಿಕ ಶಿಕ್ಷಣ ಇಲಾಖೆ 2
20 ಕೈಗಾರಿಕಾ ತರಬೇತಿ ಸಂಸ್ಥೆ 2
21 ಜಿಲ್ಲಾ ಕೇಂದ್ರ ಗ್ರಂಥಾಲಯ 1
22 ಪಿ.ಎಲ್.ಡಿ. ಬ್ಯಾಂಕ್ 1
23 ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ 1
24 ತಾಲ್ಲೂಕು ಕಛೇರಿ 1
25 ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ 1
ಒಟ್ಟು 750
 

2022-23ರ ಸಾಲಿನ ಉತ್ಪಾದನಾ ಘಟಕದ ವರದಿ

ಕ್ರ.ಸ ಉತ್ಪಾದಿಸಿದ ಸಾಮಗ್ರಿಗಳ ವಿವರ ಪ್ರಮಾಣ
ಸಿಮೆಂಟ್ ಆಧಾರಿತ
1 ಸಿಮೆಂಟ್ ಕಾಂಕ್ರೀಟ್ ಬ್ಲಾಕ್ಸ್ (16″x8″x6″) 47142
2 ಸಿಮೆಂಟ್ ಕಾಂಕ್ರೀಟ್ ಬೆಂಚ್ (ಮಾರಾಟ) 50
ಸಿಮೆಂಟ್ ರಹಿತ
3 ಬಾಗಿಲು 2′.6″ x 7 7
4 ಬಾಗಿಲು 3 x 7 10
5 ಬಾಗಿಲು 3′.6″ x 6′.6″ 3
6 ಬಾಗಿಲು 4 x 7 13
7 ಬಾಗಿಲು 5 x 7 3
8 ಕಿಟಕಿ 4 x 4 30
9 ಕಿಟಕಿ 5 x 4 21
10 ಗ್ರಿಲ್ 4 x 4 20
11 ವೆಂಟಿಲೇಟರ್ 2′.6″ x 2 8
12 ವೆಂಟಿಲೇಟರ್ 2 x 2 6